ತಿಳಿಕೋಳದಂತೆ ನಿರ್ಮಲ ನಯನಗಳ ಬೆಳದಿಂಗಳ ಬಾಲೆ ಮಾನಸಿಗೀಗ ೬ ತಿಂಗಳು.ವಿಭೂತಿ ಹಚ್ಜಿಕೊಂಡರೇ ಥೇಟ ಭಕ್ತಿ ಭಂಡಾರಿ ಬಸವಣ್ಣ.ಕೆಲವೊಮ್ಮೆ ಮಂದನಗೆ,ಮುಗಳ್ನಗೆ ಬೀರುವ ಸುಹಾಸಿನಿ.ಬೆಡ್ಡ ತುಂಬಾ ಅಂಬೆಗಾಲಿಟ್ಟು ಹರಿದಾಡುವ ಹುಲ್ಲೆ.ಪುಟ್ಟ ಪುಟ್ಟ ಪಾದದ ಮೇಲೆ ನಿಲ್ಲಿಸಿದಾಗ ಸಂತಸದಿಂದ ಪಟಪಟನೇ ಕೈ ಬಡಿಯುವ ಪುಟಾಣಿ.ಸಿಕ್ಕಿದ್ದೇನೆಲ್ಲಾ ಕಚ್ಚಲು ನೋಡುವ ಚಕೋರಿ.ಮನೆ ಮಂದಿನೆಲ್ಲಾ ಗುರಿತಿಸತೊಡಗಿರುವ ಮಾನಸಿ,ಎಲ್ಲವನ್ನು ಕುತೂಹಲದಿಂದ ನೋಡುವ ಸುಕುಮಾರಿ.ಈಗಾಗಲೇ ಒಂದು ಹಲ್ಲು ಬಂದಿರುವ ಮಾನಸಿಗೆ,iPad ಕಂಡರೆ ಪ್ರೀತಿ.ಹಾಲು ಕುಡಿಯಲು ಅತೀವ ಹಟ ಮಾಡುವಳು. ಬೆಳಿಗ್ಗೆ ಸುತ್ತಾಡಲು ಕರೆದುಕೊಂಡು ಹೊದಾಗ ವಾಹನಗಳನ್ನು ಮತ್ತು ಪ್ರಾಣಿಗಳನ್ನು ಆಸಕ್ತಿಯಿಂದ ವಿಕ್ಷೀಸುವ ಮಾನಸಿ ಈಗ ನಮ್ಮ ಮನೆಯ ಮುದ್ದಿನ ಕಣ್ಮಣಿ.
Sunday, October 2, 2011
ಮಾನಸಿ ೬ ತಿಂಗಳು

Monday, July 4, 2011
Sunday, May 1, 2011
ಮಾನಸಿ
ಮಾನಸಿ
ಈವತ್ತಿಗೆ ನಮ್ಮ ಕಂದ ಹುಟ್ಟಿ ೨೧ ದಿನ ಹಾಗೂ ನಾಮಕರಣದ ದಿನ. ಮನೆ ತುಂಬಾ ಜನ ಮತ್ತೆ ಗಡಿಬಿಡಿ. ಬಂದಿರುವ ಜನಗಳಲ್ಲಿ ತುಂಬಾ ಜನ ಚಿಕ್ಕ ಮಕ್ಕಳು.ಅವುಗಳ ಪಾಪು,ಪಾಪು ಅಂತ ನಮ್ಮ ಕಂದನನ್ನು ಮುಟ್ಟಲು ಬರುವುದು ಸಾಮಾನ್ಯವಾಗಿತ್ತು.ಯಾರದರೂ ತುಸು ಸದ್ದು ಮಾಡಿದರೂ ಆ ಕಡೆ ಕಣ್ಣು ತಿರುಗಿಸುವಳು ನಮ್ಮ ಪುಟಾಣಿ.ಸಣ್ಣ ಸದ್ದಿಗೆ ಕೂಡ ಸ್ಪಂದಿಸುವಳು.ಸುಮಾರು ಹೆಸರುಗಳ ಹುಡಕಾಟದ ನಂತರ ನಾವಿಟ್ಟ ಹೆಸರು ಮಾನಸಿ.ನಾಮಕರಣದ ದಿನ ಜಾಂಬಳಿ ಬಟ್ಟೆ ತೊಟ್ಟ ಮಾನಸಿ,ಬಣ್ಣದ ಚಿಟ್ಟೆಯಂತೆ ಕಂಗೊಳಿಸತ್ತಿದ್ದಳು. ತೊಟ್ಟಿಲಕ್ಕೆ ಹಾಕುವ ಸಂಪ್ರದಾಯ ಮಾಡಿ ೩-೪ ಜೋಗುಳ ಹಾಡಿದಾಗ ಮಾನಸಿ ಗಾಢ ನಿದ್ರೆಗೆ.
ಮಾನಸಿ ದೊಡ್ಡ ಡಬಲ್ ಬೆಡ್ಡಿನ ಮದ್ಯೆ ಬಣ್ಣದ ಚಾದರ ಮೇಲೆ ಹೂವಿನಂತೆ ಮಲಗುವಳು.ಮಿಠಾಯಿ ಅಂಗಡಿಯಲ್ಲಿ ಜಾಮೂನಿನ ಮೇಲೆ ಇಟ್ಟಂತೆ ಮಗುವಿನ ಮೇಲೊಂದು ಪುಟ್ಟ ಛತ್ರಿಯನ್ನು ಇಡಲಾಗುವುದು ಮಾನಸಿ ಮಲಗಿದಾಗ.ಮಾನಸಿ ಅಳುವುದು ಮೂರು ಸಮಯದಲ್ಲಿ....ಒದ್ದೆ ಮಾಡಿಕೊಂಡಾಗ ಜೋರಾಗಿ ಅಳುವುದು,ಹಸಿದಾಗ ರಚ್ಚೆ ಹಿಡಿದು ಅಳುವುದು ಮತ್ತು ರಾತ್ರಿ ಎಣ್ಣೆ ಹಚ್ಚಿ ಏರೆಯುವಾಗ ಅಳುವುದು. ಏರದಾದ ನಂತರ ನಿದ್ದೆಯ ಪ್ರಶಾಂತ ಸಮುದ್ರದಲ್ಲಿ ಮುಳಗಿ ಹೋಗುವಳು. ಜಾಸ್ತಿ ಕಿರಿಕಿರಿಯಾದಾಗ ಜೋಳಿಗೆಯಲ್ಲಿ ಹಾಕಿದರೆ ತಕ್ಷಣವೇ ನಿದ್ದೆಗೆ ಜಾರುವಳು......
Monday, April 11, 2011
ನಮ್ಮ ಕಂದ
ಅರ್ಪಣೆ ಮತ್ತು ಪ್ರೇರಣೆ - ಬೇಂದ್ರೆ ಅಜ್ಜನಿಗೆ ಮತ್ತು ಅವರ ಮುಗಿಲ ಮಾರಿಗೆ ಎನ್ನುವ ಕವನ.

ಅಜ್ಜ ಅಜ್ಜಿಯ ಜೀವ ಗಾಬರಿಯಿಂದ ಕಾಯುತಿತ್ತ
ಆಗ ರಾತ್ರಿ ಅಗಿತ್ತ
ರೋಹಿಣಿದ್ಯಾಗ ಕೂಸಿನ ಅಳುವ ಕೇಳಿ ಬಂದಿತ್ತ
ತಾಯಿಯ ಅರಿವು ಹೋಗಿತ್ತ |1|
ದಪ್ಪ ಮೂಗಿನ ಪಾಪು,ನಾಲಿಗೆ ಹೊರಗೆ ಹಾಕುತಿತ್ತ
ತಾಸಿಗೆ ಒಮ್ಮೆ ಹಾಲು ಬೆಡುತಿತ್ತ
ಮಾರನೆ ದಿನ ಪಿಳಿ ಪಿಳಿ ಕಣ್ಣು ಬಿಡುತಿತ್ತ
ಗಿಡ್ಡ ಕಿವಿಯ,ಚಿವಗಣ್ಣಿನ ಕೂಸು ಚಂದಗೆ ಮಲಗುತಿತ್ತ |2|
ಕನಸಿನ್ಯಾಗ ಎನೋ ಕಂಡ ಬೆದರುತಿತ್ತ
ಸಣ್ಣ ಸದ್ದಿಗೆ ಮಿಡುಕತಿತ್ತ
ಹಸಿದ್ಯಾಗ ರೊಯ್ಯನೇ ಅಳುತಿತ್ತ
ಕೈ-ಕಾಲು ಸಣ್ಣಗೆ ಬಡಿಯುತಿತ್ತ |3|
ಅಪ್ಪ- ಅಮ್ಮನ ಲಕ್ಷ ಸೆಳೆಯುತಿತ್ತ
ಮುಂದೆ ಮಗುವಿನ ಲಾಲನೆ ಪಾಲನೆ ನಮ್ಮ ಮೇಲಿತ್ತ
ಸೋಮವಾರ ಮನೆಗೆ ಬಂದ್ಯಾಗ ಸಂತಸ ತುಂಬಿತ್ತ
ಎಲ್ಲರ ಮುಖದ್ಯಾಗ ಹರ್ಷದ ಹೊನಲು ತೇಲುತಿತ್ತ |4|
Subscribe to:
Comments (Atom)