Monday, April 11, 2011

ನಮ್ಮ ಕಂದ


ಅರ್ಪಣೆ ಮತ್ತು ಪ್ರೇರಣೆ - ಬೇಂದ್ರೆ ಅಜ್ಜನಿಗೆ ಮತ್ತು ಅವರ ಮುಗಿಲ ಮಾರಿಗೆ ಎನ್ನುವ ಕವನ.





ಅಜ್ಜ ಅಜ್ಜಿಯ ಜೀವ ಗಾಬರಿಯಿಂದ ಕಾಯುತಿತ್ತ
ಆಗ ರಾತ್ರಿ ಅಗಿತ್ತ
ರೋಹಿಣಿದ್ಯಾಗ ಕೂಸಿನ ಅಳುವ ಕೇಳಿ ಬಂದಿತ್ತ
ತಾಯಿಯ ಅರಿವು ಹೋಗಿತ್ತ |1|

ದಪ್ಪ ಮೂಗಿನ ಪಾಪು,ನಾಲಿಗೆ ಹೊರಗೆ ಹಾಕುತಿತ್ತ
ತಾಸಿಗೆ ಒಮ್ಮೆ ಹಾಲು ಬೆಡುತಿತ್ತ
ಮಾರನೆ ದಿನ ಪಿಳಿ ಪಿಳಿ ಕಣ್ಣು ಬಿಡುತಿತ್ತ
ಗಿಡ್ಡ ಕಿವಿಯ,ಚಿವಗಣ್ಣಿನ ಕೂಸು ಚಂದಗೆ ಮಲಗುತಿತ್ತ |2|

ಕನಸಿನ್ಯಾಗ ಎನೋ ಕಂಡ ಬೆದರುತಿತ್ತ
ಸಣ್ಣ ಸದ್ದಿಗೆ ಮಿಡುಕತಿತ್ತ
ಹಸಿದ್ಯಾಗ ರೊಯ್ಯನೇ ಅಳುತಿತ್ತ
ಕೈ-ಕಾಲು ಸಣ್ಣಗೆ ಬಡಿಯುತಿತ್ತ |3|

ಅಪ್ಪ- ಅಮ್ಮನ ಲಕ್ಷ ಸೆಳೆಯುತಿತ್ತ
ಮುಂದೆ ಮಗುವಿನ ಲಾಲನೆ ಪಾಲನೆ ನಮ್ಮ ಮೇಲಿತ್ತ
ಸೋಮವಾರ ಮನೆಗೆ ಬಂದ್ಯಾಗ ಸಂತಸ ತುಂಬಿತ್ತ
ಎಲ್ಲರ ಮುಖದ್ಯಾಗ ಹರ್ಷದ ಹೊನಲು ತೇಲುತಿತ್ತ |4|

4 comments:

  1. ಅಭಿನಂದನೆಗಳು ಮಹಾಂತೇಶ್ ಮತ್ತು ಗೌರಿ ಅವರಿಗೆ !
    ಕಂದನಿಗೆ ಸ್ವಾಗತ !!

    ReplyDelete
  2. ಕನ್ನಡದಲ್ಲಿ ಮತ್ತೊಂದು ಕಂದನ ಬ್ಲಾಗ್ ನೋಡಿ ಖುಶಿ ಆಯ್ತು:) ಮುದ್ದು ಮಗುವಿಗೆ ಶುಭ ಹಾರೈಕೆಗಳು!!

    ReplyDelete
  3. ಅಪ್ಪ-ಅಮ್ಮ ,
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಪುಟ್ಟಿಯ ಅಮ್ಮ
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete