ಮಾನಸಿ
ಈವತ್ತಿಗೆ ನಮ್ಮ ಕಂದ ಹುಟ್ಟಿ ೨೧ ದಿನ ಹಾಗೂ ನಾಮಕರಣದ ದಿನ. ಮನೆ ತುಂಬಾ ಜನ ಮತ್ತೆ ಗಡಿಬಿಡಿ. ಬಂದಿರುವ ಜನಗಳಲ್ಲಿ ತುಂಬಾ ಜನ ಚಿಕ್ಕ ಮಕ್ಕಳು.ಅವುಗಳ ಪಾಪು,ಪಾಪು ಅಂತ ನಮ್ಮ ಕಂದನನ್ನು ಮುಟ್ಟಲು ಬರುವುದು ಸಾಮಾನ್ಯವಾಗಿತ್ತು.ಯಾರದರೂ ತುಸು ಸದ್ದು ಮಾಡಿದರೂ ಆ ಕಡೆ ಕಣ್ಣು ತಿರುಗಿಸುವಳು ನಮ್ಮ ಪುಟಾಣಿ.ಸಣ್ಣ ಸದ್ದಿಗೆ ಕೂಡ ಸ್ಪಂದಿಸುವಳು.ಸುಮಾರು ಹೆಸರುಗಳ ಹುಡಕಾಟದ ನಂತರ ನಾವಿಟ್ಟ ಹೆಸರು ಮಾನಸಿ.ನಾಮಕರಣದ ದಿನ ಜಾಂಬಳಿ ಬಟ್ಟೆ ತೊಟ್ಟ ಮಾನಸಿ,ಬಣ್ಣದ ಚಿಟ್ಟೆಯಂತೆ ಕಂಗೊಳಿಸತ್ತಿದ್ದಳು. ತೊಟ್ಟಿಲಕ್ಕೆ ಹಾಕುವ ಸಂಪ್ರದಾಯ ಮಾಡಿ ೩-೪ ಜೋಗುಳ ಹಾಡಿದಾಗ ಮಾನಸಿ ಗಾಢ ನಿದ್ರೆಗೆ.
ಮಾನಸಿ ದೊಡ್ಡ ಡಬಲ್ ಬೆಡ್ಡಿನ ಮದ್ಯೆ ಬಣ್ಣದ ಚಾದರ ಮೇಲೆ ಹೂವಿನಂತೆ ಮಲಗುವಳು.ಮಿಠಾಯಿ ಅಂಗಡಿಯಲ್ಲಿ ಜಾಮೂನಿನ ಮೇಲೆ ಇಟ್ಟಂತೆ ಮಗುವಿನ ಮೇಲೊಂದು ಪುಟ್ಟ ಛತ್ರಿಯನ್ನು ಇಡಲಾಗುವುದು ಮಾನಸಿ ಮಲಗಿದಾಗ.ಮಾನಸಿ ಅಳುವುದು ಮೂರು ಸಮಯದಲ್ಲಿ....ಒದ್ದೆ ಮಾಡಿಕೊಂಡಾಗ ಜೋರಾಗಿ ಅಳುವುದು,ಹಸಿದಾಗ ರಚ್ಚೆ ಹಿಡಿದು ಅಳುವುದು ಮತ್ತು ರಾತ್ರಿ ಎಣ್ಣೆ ಹಚ್ಚಿ ಏರೆಯುವಾಗ ಅಳುವುದು. ಏರದಾದ ನಂತರ ನಿದ್ದೆಯ ಪ್ರಶಾಂತ ಸಮುದ್ರದಲ್ಲಿ ಮುಳಗಿ ಹೋಗುವಳು. ಜಾಸ್ತಿ ಕಿರಿಕಿರಿಯಾದಾಗ ಜೋಳಿಗೆಯಲ್ಲಿ ಹಾಕಿದರೆ ತಕ್ಷಣವೇ ನಿದ್ದೆಗೆ ಜಾರುವಳು......
ಮಹಾಂತೇಶರೆ,
ReplyDeleteಮಕ್ಕಳನ್ನು, ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಸುಖಕ್ಕಿಂತ ಹೆಚ್ಚಿನ ಸುಖವಿಲ್ಲ. ನಿಮಗೀಗ ಮೊದಲನೆಯ ಸುಖ ಪ್ರಾಪ್ತವಾಗಿದೆ. ಕಾಲಾಂತರದಲ್ಲಿ ಎರಡನೆಯ ಸುಖವೂ ಸಹ ಲಭ್ಯವಾಗುವದು!
ನಿಮ್ಮ ಲೇಖನದಲ್ಲಿ ಮಗುವಿನ ಬಗೆಗಿರುವ ಮಮತೆ ಎದ್ದು ಕಾಣುತ್ತದೆ. ಓದುವವರಿಗೂ ಸಹ ಸುಖ ನೀಡುತ್ತದೆ. ಇದಕ್ಕೂ ಮೊದಲಿನ ಕವನವನ್ನೂ ಸಹ ಈಗಲೇ ಓದಿದೆ. ಸುಂದರವಾದ ಕವನ. ಮಗು ಅಪ್ಪನನ್ನು ಕವಿಯಾಗಿ ಮಾಡುತ್ತಿದೆ, ಅಲ್ಲವೆ!
ಕಾಕಾ
ReplyDeleteಹೌದು...ಮಕ್ಕಳನ್ನು ಆಡಿಸುವ ಸುಖಕ್ಕಿಂತ ಬೇರೆ ಸುಖವಿಲ್ಲ. ಈಗೀಗ ಸಮಯ ಹೋದದ್ದೇ ಗೊತ್ತಗುವದಿಲ್ಲ.ವಾರಕ್ಕೊಮ್ಮೆ ಹುಬ್ಬಳ್ಳಿಗೊಮ್ಮೆ ಭೇಟಿ :)