ಪ್ರಿಯ ಮಾನಸಿ,
ನಮ್ಮೆಲ್ಲರ ನಲ್ಮೆಯ ಕಣ್ಮಣಿ,ಮುದ್ದಿನ ಮಗು,ಉತ್ಸಾಹದ ಚಿಲುಮೆ,ಕಂಡೆದೆನ್ನಲ್ಲಾ ಕಿತ್ತು ಹಾಕುವ ಕೂತುಹಲಿ, ವರ್ಷದ ಹಿಂದೆ ಪ್ರಥಮ ಬಾರಿಗೆ ನೀನಿಟ್ಟ ಆ ಎರಡು ಪುಟ್ಟ ಹೆಜ್ಜೆಗಳು, ಅಮ್ಮನಲ್ಲಿ ಅದು ಮೂಡಿಸಿದ ವಿಸ್ಮಯ, 'ಪಿತಾ... ಪಿತಾ...' ಅನ್ನುತ್ತಾ ಕೊಡುವ ಮುದ್ದಿನ ಏಟು,ಪಾ (ಮುತ್ತು) ಕೊಡು ಎಂದಾಗ ನೀನೇ ನಿನ್ನ ಗಲ್ಲವನ್ನು ಮುದ್ದು ಮಾಡುವದು,ಅಜ್ಜಿ ಚಕ್ರೀ(ಸಕ್ಕರೆ) ಪುಟಾಣಿ ಕೊಡು ಅನ್ನೊ ಮಾತು,ದಿನವಿಡಿ ಕೇಳುವ ನಿನ್ನ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್ ಅನ್ನುವ ಪಲ್ಲವಿ, ಅಜ್ಜ ಕ್ಲಾಪ್ ಮಾಡು,ಅಜ್ಜಿ ಕ್ಲಾಪ್ ಮಾಡು ಅನ್ನೊ ಬೇಡಿಕೆ,ಹೊರಗಡೆ ತಿರುಗಾಡಲು ಹೋದಾಗ ಎರಡು ಕೈ ಎತ್ತಿ ಏತ್ಕೋ ಅನ್ನೊ ಕೋರಿಕೆ,ಅಕ್ಕು ಶಾಲೆಯಿಂದ ಬಂದಾಗ ಓಡಿ ಹೋಗಿ ಬರಮಾಡಿಕೋಳ್ಳುವಿಕೆ,ಸೋನು ಚೊಟು ಅನ್ನುವಾಗ ತಪ್ಪದೇ ಸೋನು, ಚೋಟೀ ಅನ್ನುವ ತುಂಟತನ,ಬೆಳೆಗ್ಗೆ ಜಳಕಕ್ಕೆ ಹೋದಾಗ ಬುಶ ಮಾಡಿಸು ಅನ್ನುವ ವರಾತ,'ಗೌರಿ ಅಮ್ಮಾ .........' ಅಂತಾ ರಾಗವಾಗಿ ಕರೆಯುವ ಕರೆ,ಬೆಂಗಳೂರ ಅಜ್ಜನ ಕೆಮ್ಮಿನ ಅನುಕರಣೆ,’ಪಿತೂ’ ಅಂತಾ ಹುಬ್ಬಳ್ಳಿ ಅಜ್ಜನ ಕರೆಯುವ ರೀತಿ,ಟಿ.ವಿ ಹಾಡಿಗೆ ನೀನು ಹಾಕುವ ಅನನ್ಯ ಹೆಜ್ಜೆ,ಚಮ್ಮಾಗೆ(ಚಂದಮಾಮ) ಬಾ, ಬಾ ಮತ್ತು ಬೊಂಬೆಗಳಿಗೆ ಕಣ್ಮಚ್ಚು ಅಂತ ಹೇಳುವ ಬಗೆ,ಅಕಾಶದಲ್ಲಿ ನಕ್ಷತ್ರಗಳನ್ನು ತೋರಿಸುವ ಪರಿ,ಹೊರಗಡೆ ಅಕಳು ಅಂಬಾ.......... ಅಂತಾ ಕರೆದರೆ ನಿನ್ನ ಮುಖದಲ್ಲಿ ಮೂಡುವ ಬೆರಗು,ಮತ್ತು ಅದಕ್ಕೆ ಅಚ್ಚಿ(ರೊಟ್ಟಿ) ಹಾಕೋಣ ಅಂತಾ ಬೆನ್ನು ಬೀಳುವುದು,ಪೊಟೊದಲ್ಲಿ ದೊಡ್ಡಮ್ಮ ಬಂದರೆ,ತೋರಿಸುವ ಬಗೆ,ಎ ಬಿ ಸಿ ಡಿ ಹಾಡನ್ನು ನಿನ್ನದೆ ಲಯದಲ್ಲಿ ಹಾಡುಗಾರಿಕೆ,ಹೊಟ್ಟೆ ಹಸಿದಾಗ ಆ..ಆ...ಅಂತ ಬಾಯಿ ತೋರಿಸುವ ಬಗೆ,ಕಡ್ಲಿಕಾಳು,ಶೇಂಗಾ ಮತ್ತು ಧಾರವಾಡ ಪೇಡ್ ಬಗ್ಗೆ ಅತೀವ ಪ್ರೀತಿ,ಊಳ್ಳಾಗಡ್ದಿ ಮತ್ತು ಶೇಂಗಾವನ್ನು ಅಜ್ಜನ ಪ್ಲೇಟಿನಲ್ಲಿ ಹುಡುಕುವ ಬಗೆ,ಪಾರಿವಾಳ ಗೂಕ್ ಗೂಕ್ ಅನ್ನುವ ಅನುಕರಣೆ,ಕಾರಿನಲ್ಲಿ' ಪಾತಿ... ಪಾತಿ' (ಪಾತರಗಿತ್ತಿ ಪಕ್ಕಾ), 'ಬಂದಾನೊ ಬಂದಾ ಸವಾರ' ಹಾಡು ಹಾಕು ಅನ್ನುವ ಹಠ,ಪುರುಕ ಅಂತಾ ಹೂಸು ಬಿಟ್ಟು ನೀ ಕೊಡುವ ವಿಲಕ್ಷಣ ನಗು, ಯಾರು ಬಿಟ್ಟಿದ್ದು ಅಂತ ಕೇಳಿದರೆ ಬೇರೆಯರನ್ನು ತೊರಿಸುವ ಕಿಲಾಡಿತನ,ಮೆಟ್ಟಿಲನ್ನು ಯಾರ ಸಹಾಯವಿಲ್ಲದೇ ಹತ್ತಬೇಕೆನ್ನುವ ಛಲ, ನಿನಗೆ ಬೇಡವಾದರೆ,ಗಜಮ ನಿಂತರೂ ಉಣ್ಣಲು ಬಾಯಿ ತಗೆಯದ ಮನು,ಬಟ್ಟೆ ಹಾಕದವರನ್ನು ಕಂಡರೆ ನೀನು ಹೇಳುವ ಶೇಮ್ ಶೇಮ್ ಸ್ಲೋಗನ್ನು ಮತ್ತು ಇನ್ನು ಅನೇಕಾನೇಕ ಪ್ರಕರಣಗಳಿಂದ ಕಳೆದು ಎರಡು ವರ್ಷಗಳು ಕ್ಷಣಗಳಂತೆ ಉರುಳಿ ಹೋದವು ಎಂಬದರ ಬಗ್ಗೆ ಅರಿವೇ ಇಲ್ಲಾ.
ಇಂತಿ ನಿನ್ನ ಪ್ರೀತಿಯ,
ಅಪ್ಪಾ.................
ಮಗುವಿನ ಮುದ್ದಾಟಗಳು ಬಾಳಿನ ಸಂತೋಷದ ಕ್ಷಣಗಳು. ಆ ಸಂತೋಷವನ್ನು ನಿಮಗೆ ನೀಡಿದ ಮುದ್ದು ಮಾನಸಿಗೆ ಒಲವಿನ ಶುಭಾಶಯಗಳು. ನಿಮ್ಮ ಸಂತೋಷ ನೂರ್ಮಡಿಯಾಗುತ್ತಿರಲಿ ಎಂದು ಹಾರೈಸುವೆ.
ReplyDeleteನಿಮ್ಮ ಪ್ರೀತಿಯ ಮಗಳ ಮಾನಸಿಯ ಚಲನವಲನಗಳನ್ನು ಓದಿ ತುಂಬಾ ಖುಶಿಯಾಯಿತು:)
ReplyDeleteಹಾರೈಕೆಗಳೊಂದಿಗೆ,
ಸಂಜಯ ಮಾಸೂರ
This is really cute. Loved it.
ReplyDeleteHarish Kamat
ಸುನಾಥ ಕಾಕಾ,
ReplyDeleteನಿಮ್ಮ ಹಾರೈಕೆಗೆ ಮತ್ತು ಅಭಿನಂದನೆಗಳಿಗೆ ದನ್ಯವಾದಗಳು.
ಸಂಜಯ,
ReplyDeleteನಿಮ್ಮ ಹಾರೈಕೆಗೆ ಮತ್ತು ಅಭಿನಂದನೆಗಳಿಗೆ ದನ್ಯವಾದಗಳು.
Harish,
ReplyDeleteThanks for your comment.