Sunday, May 1, 2011

ಮಾನಸಿ




ಮಾನಸಿ

ಈವತ್ತಿಗೆ ನಮ್ಮ ಕಂದ ಹುಟ್ಟಿ ೨೧ ದಿನ ಹಾಗೂ ನಾಮಕರಣದ ದಿನ. ಮನೆ ತುಂಬಾ ಜನ ಮತ್ತೆ ಗಡಿಬಿಡಿ. ಬಂದಿರುವ ಜನಗಳಲ್ಲಿ ತುಂಬಾ ಜನ ಚಿಕ್ಕ ಮಕ್ಕಳು.ಅವುಗಳ ಪಾಪು,ಪಾಪು ಅಂತ ನಮ್ಮ ಕಂದನನ್ನು ಮುಟ್ಟಲು ಬರುವುದು ಸಾಮಾನ್ಯವಾಗಿತ್ತು.ಯಾರದರೂ ತುಸು ಸದ್ದು ಮಾಡಿದರೂ ಆ ಕಡೆ ಕಣ್ಣು ತಿರುಗಿಸುವಳು ನಮ್ಮ ಪುಟಾಣಿ.ಸಣ್ಣ ಸದ್ದಿಗೆ ಕೂಡ ಸ್ಪಂದಿಸುವಳು.ಸುಮಾರು ಹೆಸರುಗಳ ಹುಡಕಾಟದ ನಂತರ ನಾವಿಟ್ಟ ಹೆಸರು ಮಾನಸಿ.ನಾಮಕರಣದ ದಿನ ಜಾಂಬಳಿ ಬಟ್ಟೆ ತೊಟ್ಟ ಮಾನಸಿ,ಬಣ್ಣದ ಚಿಟ್ಟೆಯಂತೆ ಕಂಗೊಳಿಸತ್ತಿದ್ದಳು. ತೊಟ್ಟಿಲಕ್ಕೆ ಹಾಕುವ ಸಂಪ್ರದಾಯ ಮಾಡಿ ೩-೪ ಜೋಗುಳ ಹಾಡಿದಾಗ ಮಾನಸಿ ಗಾಢ ನಿದ್ರೆಗೆ.

ಮಾನಸಿ ದೊಡ್ಡ ಡಬಲ್ ಬೆಡ್ಡಿನ ಮದ್ಯೆ ಬಣ್ಣದ ಚಾದರ ಮೇಲೆ ಹೂವಿನಂತೆ ಮಲಗುವಳು.ಮಿಠಾಯಿ ಅಂಗಡಿಯಲ್ಲಿ ಜಾಮೂನಿನ ಮೇಲೆ ಇಟ್ಟಂತೆ ಮಗುವಿನ ಮೇಲೊಂದು ಪುಟ್ಟ ಛತ್ರಿಯನ್ನು ಇಡಲಾಗುವುದು ಮಾನಸಿ ಮಲಗಿದಾಗ.ಮಾನಸಿ ಅಳುವುದು ಮೂರು ಸಮಯದಲ್ಲಿ....ಒದ್ದೆ ಮಾಡಿಕೊಂಡಾಗ ಜೋರಾಗಿ ಅಳುವುದು,ಹಸಿದಾಗ ರಚ್ಚೆ ಹಿಡಿದು ಅಳುವುದು ಮತ್ತು ರಾತ್ರಿ ಎಣ್ಣೆ ಹಚ್ಚಿ ಏರೆಯುವಾಗ ಅಳುವುದು. ಏರದಾದ ನಂತರ ನಿದ್ದೆಯ ಪ್ರಶಾಂತ ಸಮುದ್ರದಲ್ಲಿ ಮುಳಗಿ ಹೋಗುವಳು. ಜಾಸ್ತಿ ಕಿರಿಕಿರಿಯಾದಾಗ ಜೋಳಿಗೆಯಲ್ಲಿ ಹಾಕಿದರೆ ತಕ್ಷಣವೇ ನಿದ್ದೆಗೆ ಜಾರುವಳು......