Monday, June 17, 2013

Manu's First day school

                                                              
Manasi was getting ready for school (First day of school).
Manu/Manasi:  Where am I going?
Mom (Gouri):  You are going to the play home school that we saw other day.
Manu: (as expected): Why?
Mom: To play in the slide & swing. Also there are lots of friends & teacher.

Manu was ready in her bright yellow and blue dress. The little brown school bag that mainly had snacks box and water bottle inside it.

We took her to the school.

We didn't know how she would react when it’s time to go inside the school. Is she going to cry and insist she won't go? In any case, we thought we will hang around the school.

 So we took her to the play home and left her at the class room where there were already 2 other kids. Soon she started crying. She cried a lot. With her another kid also started crying. So soon there was competition for crying between 2-3 kids.

 We took courage and left her with the teacher. We came out of school and then waited for some more time outside. There was no noise from Manu. We thought she was adjusted and playing with other kids.

 We knew she needs to be in school for 3 hours. But it felt like time was running very slow. We were wondering if she started crying again.

Finally after 2 hours, it was time for Manasi to come out of school.

There she was….

Our little girl was in teacher’s hands crying continuously. She looked little scared, little puzzled & little tensed. As soon as she saw us, her eyes lit up. She rushed to us and hugged us.

We were very eager to hear how it went. Teacher & maid were informed that Manasi cried a lot and after that she slept in the class. It’s first day, all kids behave the same and she will get adjusted. She needs some time. Don’t worry about it.

Me and Gouri thought, we shouldn't send Manasi to school for sleeping.

Second Day:

Previous day experience made us very nervous. We both were thinking that what if she cries again? What will do if sleeps in the class?

To our surprise, she went to school calmly without crying and started playing with other kids. Probably she must have understood (????) that this is her daily routines for coming days.

Gouri was waiting outside near the school. After 3 hours she went to school and Manu was fine. She didn't cried and looks fine. Teacher told Manu was good in school and didn't make any trouble. Gouri was so happy after hearing it.

Manu was adjusted to playschool very well. She finishes her snacks during the break. After coming from school she used to sing all the rhymes at homes with her mother and grandmother. She got 2 stars in the first week on her hand which she was showing to us whole day.
                                                      
              
After a week:

On first day of second week, it’s time for school uniforms. Manasi looks very good in uniforms and we decided to send her in school Van. We just want to try if she can adjust school VAN or not. Manu went happily inside the VAN and waived her hands towards us. We fallowed the VAN till the school to check Manu’s behavior. After reaching school she was calm, went inside the school with big smile stated playing school.

We both finally took big sigh of relief and felt Manasi finally is going school.

Inspired by Appa –Amma (Shiv)Blog


Tuesday, February 5, 2013

ಮಾನಸಿ - ಮುದ್ದಿನ ಕಣ್ಮಣಿ

  


                                                           ಪ್ರಿಯ ಮಾನಸಿ,
 
               ನಮ್ಮೆಲ್ಲರ ನಲ್ಮೆಯ ಕಣ್ಮಣಿ,ಮುದ್ದಿನ ಮಗು,ಉತ್ಸಾಹದ ಚಿಲುಮೆ,ಕಂಡೆದೆನ್ನಲ್ಲಾ ಕಿತ್ತು ಹಾಕುವ ಕೂತುಹಲಿ, ವರ್ಷದ ಹಿಂದೆ ಪ್ರಥಮ ಬಾರಿಗೆ ನೀನಿಟ್ಟ ಆ ಎರಡು ಪುಟ್ಟ ಹೆಜ್ಜೆಗಳು, ಅಮ್ಮನಲ್ಲಿ ಅದು ಮೂಡಿಸಿದ ವಿಸ್ಮಯ, 'ಪಿತಾ... ಪಿತಾ...' ಅನ್ನುತ್ತಾ ಕೊಡುವ ಮುದ್ದಿನ ಏಟು,ಪಾ (ಮುತ್ತು) ಕೊಡು ಎಂದಾಗ ನೀನೇ ನಿನ್ನ ಗಲ್ಲವನ್ನು ಮುದ್ದು ಮಾಡುವದು,ಅಜ್ಜಿ ಚಕ್ರೀ(ಸಕ್ಕರೆ) ಪುಟಾಣಿ ಕೊಡು ಅನ್ನೊ ಮಾತು,ದಿನವಿಡಿ ಕೇಳುವ ನಿನ್ನ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್ ಅನ್ನುವ ಪಲ್ಲವಿ, ಅಜ್ಜ ಕ್ಲಾಪ್ ಮಾಡು,ಅಜ್ಜಿ ಕ್ಲಾಪ್ ಮಾಡು ಅನ್ನೊ ಬೇಡಿಕೆ,ಹೊರಗಡೆ ತಿರುಗಾಡಲು ಹೋದಾಗ ಎರಡು ಕೈ ಎತ್ತಿ ಏತ್ಕೋ ಅನ್ನೊ  ಕೋರಿಕೆ,ಅಕ್ಕು ಶಾಲೆಯಿಂದ ಬಂದಾಗ ಓಡಿ ಹೋಗಿ ಬರಮಾಡಿಕೋಳ್ಳುವಿಕೆ,ಸೋನು ಚೊಟು ಅನ್ನುವಾಗ ತಪ್ಪದೇ ಸೋನು, ಚೋಟೀ ಅನ್ನುವ ತುಂಟತನ,ಬೆಳೆಗ್ಗೆ ಜಳಕಕ್ಕೆ ಹೋದಾಗ ಬುಶ ಮಾಡಿಸು ಅನ್ನುವ ವರಾತ,'ಗೌರಿ ಅಮ್ಮಾ .........' ಅಂತಾ ರಾಗವಾಗಿ ಕರೆಯುವ ಕರೆ,ಬೆಂಗಳೂರ ಅಜ್ಜನ ಕೆಮ್ಮಿನ ಅನುಕರಣೆ,’ಪಿತೂ’ ಅಂತಾ ಹುಬ್ಬಳ್ಳಿ ಅಜ್ಜನ ಕರೆಯುವ ರೀತಿ,ಟಿ.ವಿ ಹಾಡಿಗೆ ನೀನು ಹಾಕುವ ಅನನ್ಯ ಹೆಜ್ಜೆ,ಚಮ್ಮಾಗೆ(ಚಂದಮಾಮ) ಬಾ, ಬಾ ಮತ್ತು ಬೊಂಬೆಗಳಿಗೆ ಕಣ್ಮಚ್ಚು ಅಂತ ಹೇಳುವ ಬಗೆ,ಅಕಾಶದಲ್ಲಿ ನಕ್ಷತ್ರಗಳನ್ನು ತೋರಿಸುವ ಪರಿ,ಹೊರಗಡೆ ಅಕಳು ಅಂಬಾ.......... ಅಂತಾ ಕರೆದರೆ ನಿನ್ನ ಮುಖದಲ್ಲಿ ಮೂಡುವ ಬೆರಗು,ಮತ್ತು ಅದಕ್ಕೆ ಅಚ್ಚಿ(ರೊಟ್ಟಿ) ಹಾಕೋಣ ಅಂತಾ ಬೆನ್ನು ಬೀಳುವುದು,ಪೊಟೊದಲ್ಲಿ ದೊಡ್ಡಮ್ಮ ಬಂದರೆ,ತೋರಿಸುವ ಬಗೆ,ಎ ಬಿ ಸಿ ಡಿ ಹಾಡನ್ನು ನಿನ್ನದೆ ಲಯದಲ್ಲಿ ಹಾಡುಗಾರಿಕೆ,ಹೊಟ್ಟೆ ಹಸಿದಾಗ ಆ..ಆ...ಅಂತ ಬಾಯಿ ತೋರಿಸುವ ಬಗೆ,ಕಡ್ಲಿಕಾಳು,ಶೇಂಗಾ ಮತ್ತು ಧಾರವಾಡ ಪೇಡ್ ಬಗ್ಗೆ ಅತೀವ ಪ್ರೀತಿ,ಊಳ್ಳಾಗಡ್ದಿ ಮತ್ತು ಶೇಂಗಾವನ್ನು ಅಜ್ಜನ ಪ್ಲೇಟಿನಲ್ಲಿ ಹುಡುಕುವ ಬಗೆ,ಪಾರಿವಾಳ ಗೂಕ್ ಗೂಕ್ ಅನ್ನುವ ಅನುಕರಣೆ,ಕಾರಿನಲ್ಲಿ' ಪಾತಿ... ಪಾತಿ' (ಪಾತರಗಿತ್ತಿ ಪಕ್ಕಾ), 'ಬಂದಾನೊ ಬಂದಾ ಸವಾರ' ಹಾಡು ಹಾಕು ಅನ್ನುವ ಹಠ,ಪುರುಕ ಅಂತಾ ಹೂಸು ಬಿಟ್ಟು ನೀ ಕೊಡುವ ವಿಲಕ್ಷಣ ನಗು, ಯಾರು ಬಿಟ್ಟಿದ್ದು ಅಂತ ಕೇಳಿದರೆ ಬೇರೆಯರನ್ನು ತೊರಿಸುವ ಕಿಲಾಡಿತನ,ಮೆಟ್ಟಿಲನ್ನು ಯಾರ ಸಹಾಯವಿಲ್ಲದೇ ಹತ್ತಬೇಕೆನ್ನುವ ಛಲ, ನಿನಗೆ ಬೇಡವಾದರೆ,ಗಜಮ ನಿಂತರೂ ಉಣ್ಣಲು ಬಾಯಿ ತಗೆಯದ ಮನು,ಬಟ್ಟೆ ಹಾಕದವರನ್ನು ಕಂಡರೆ ನೀನು ಹೇಳುವ ಶೇಮ್ ಶೇಮ್ ಸ್ಲೋಗನ್ನು ಮತ್ತು ಇನ್ನು ಅನೇಕಾನೇಕ ಪ್ರಕರಣಗಳಿಂದ ಕಳೆದು ಎರಡು ವರ್ಷಗಳು ಕ್ಷಣಗಳಂತೆ ಉರುಳಿ ಹೋದವು ಎಂಬದರ ಬಗ್ಗೆ ಅರಿವೇ ಇಲ್ಲಾ.


ಇಂತಿ ನಿನ್ನ ಪ್ರೀತಿಯ,
 ಅಪ್ಪಾ.................

Sunday, October 2, 2011

ಮಾನಸಿ ೬ ತಿಂಗಳು


ತಿಳಿಕೋಳದಂತೆ ನಿರ್ಮಲ ನಯನಗಳ ಬೆಳದಿಂಗಳ ಬಾಲೆ ಮಾನಸಿಗೀಗ ೬ ತಿಂಗಳು.ವಿಭೂತಿ ಹಚ್ಜಿಕೊಂಡರೇ ಥೇಟ ಭಕ್ತಿ ಭಂಡಾರಿ ಬಸವಣ್ಣ.ಕೆಲವೊಮ್ಮೆ ಮಂದನಗೆ,ಮುಗಳ್ನಗೆ ಬೀರುವ ಸುಹಾಸಿನಿ.ಬೆಡ್ಡ ತುಂಬಾ ಅಂಬೆಗಾಲಿಟ್ಟು ಹರಿದಾಡುವ ಹುಲ್ಲೆ.ಪುಟ್ಟ ಪುಟ್ಟ ಪಾದದ ಮೇಲೆ ನಿಲ್ಲಿಸಿದಾಗ ಸಂತಸದಿಂದ ಪಟಪಟನೇ ಕೈ ಬಡಿಯುವ ಪುಟಾಣಿ.ಸಿಕ್ಕಿದ್ದೇನೆಲ್ಲಾ ಕಚ್ಚಲು ನೋಡುವ ಚಕೋರಿ.ಮನೆ ಮಂದಿನೆಲ್ಲಾ ಗುರಿತಿಸತೊಡಗಿರುವ ಮಾನಸಿ,ಎಲ್ಲವನ್ನು ಕುತೂಹಲದಿಂದ ನೋಡುವ ಸುಕುಮಾರಿ.ಈಗಾಗಲೇ ಒಂದು ಹಲ್ಲು ಬಂದಿರುವ ಮಾನಸಿಗೆ,iPad ಕಂಡರೆ ಪ್ರೀತಿ.ಹಾಲು ಕುಡಿಯಲು ಅತೀವ ಹಟ ಮಾಡುವಳು. ಬೆಳಿಗ್ಗೆ ಸುತ್ತಾಡಲು ಕರೆದುಕೊಂಡು ಹೊದಾಗ ವಾಹನಗಳನ್ನು ಮತ್ತು ಪ್ರಾಣಿಗಳನ್ನು ಆಸಕ್ತಿಯಿಂದ ವಿಕ್ಷೀಸುವ ಮಾನಸಿ ಈಗ ನಮ್ಮ ಮನೆಯ ಮುದ್ದಿನ ಕಣ್ಮಣಿ.

Monday, July 4, 2011

ನಕ್ಕಳಾ ರಾಜಕುಮಾರಿ




ನೀ ಹಿಂಗ ನಗುವುದು ನೋಡಿ
ಹಿಗ್ಗುವುದು ಹರ್ಷ ಅಪಾರ

ಹಿಂಗ ನಗುತ್ತ ಇದ್ದರ
ವೇಳೆ ಹೋಗುವುದು ಸಸಾರ

Sunday, May 1, 2011

ಮಾನಸಿ




ಮಾನಸಿ

ಈವತ್ತಿಗೆ ನಮ್ಮ ಕಂದ ಹುಟ್ಟಿ ೨೧ ದಿನ ಹಾಗೂ ನಾಮಕರಣದ ದಿನ. ಮನೆ ತುಂಬಾ ಜನ ಮತ್ತೆ ಗಡಿಬಿಡಿ. ಬಂದಿರುವ ಜನಗಳಲ್ಲಿ ತುಂಬಾ ಜನ ಚಿಕ್ಕ ಮಕ್ಕಳು.ಅವುಗಳ ಪಾಪು,ಪಾಪು ಅಂತ ನಮ್ಮ ಕಂದನನ್ನು ಮುಟ್ಟಲು ಬರುವುದು ಸಾಮಾನ್ಯವಾಗಿತ್ತು.ಯಾರದರೂ ತುಸು ಸದ್ದು ಮಾಡಿದರೂ ಆ ಕಡೆ ಕಣ್ಣು ತಿರುಗಿಸುವಳು ನಮ್ಮ ಪುಟಾಣಿ.ಸಣ್ಣ ಸದ್ದಿಗೆ ಕೂಡ ಸ್ಪಂದಿಸುವಳು.ಸುಮಾರು ಹೆಸರುಗಳ ಹುಡಕಾಟದ ನಂತರ ನಾವಿಟ್ಟ ಹೆಸರು ಮಾನಸಿ.ನಾಮಕರಣದ ದಿನ ಜಾಂಬಳಿ ಬಟ್ಟೆ ತೊಟ್ಟ ಮಾನಸಿ,ಬಣ್ಣದ ಚಿಟ್ಟೆಯಂತೆ ಕಂಗೊಳಿಸತ್ತಿದ್ದಳು. ತೊಟ್ಟಿಲಕ್ಕೆ ಹಾಕುವ ಸಂಪ್ರದಾಯ ಮಾಡಿ ೩-೪ ಜೋಗುಳ ಹಾಡಿದಾಗ ಮಾನಸಿ ಗಾಢ ನಿದ್ರೆಗೆ.

ಮಾನಸಿ ದೊಡ್ಡ ಡಬಲ್ ಬೆಡ್ಡಿನ ಮದ್ಯೆ ಬಣ್ಣದ ಚಾದರ ಮೇಲೆ ಹೂವಿನಂತೆ ಮಲಗುವಳು.ಮಿಠಾಯಿ ಅಂಗಡಿಯಲ್ಲಿ ಜಾಮೂನಿನ ಮೇಲೆ ಇಟ್ಟಂತೆ ಮಗುವಿನ ಮೇಲೊಂದು ಪುಟ್ಟ ಛತ್ರಿಯನ್ನು ಇಡಲಾಗುವುದು ಮಾನಸಿ ಮಲಗಿದಾಗ.ಮಾನಸಿ ಅಳುವುದು ಮೂರು ಸಮಯದಲ್ಲಿ....ಒದ್ದೆ ಮಾಡಿಕೊಂಡಾಗ ಜೋರಾಗಿ ಅಳುವುದು,ಹಸಿದಾಗ ರಚ್ಚೆ ಹಿಡಿದು ಅಳುವುದು ಮತ್ತು ರಾತ್ರಿ ಎಣ್ಣೆ ಹಚ್ಚಿ ಏರೆಯುವಾಗ ಅಳುವುದು. ಏರದಾದ ನಂತರ ನಿದ್ದೆಯ ಪ್ರಶಾಂತ ಸಮುದ್ರದಲ್ಲಿ ಮುಳಗಿ ಹೋಗುವಳು. ಜಾಸ್ತಿ ಕಿರಿಕಿರಿಯಾದಾಗ ಜೋಳಿಗೆಯಲ್ಲಿ ಹಾಕಿದರೆ ತಕ್ಷಣವೇ ನಿದ್ದೆಗೆ ಜಾರುವಳು......

Monday, April 11, 2011

ನಮ್ಮ ಕಂದ


ಅರ್ಪಣೆ ಮತ್ತು ಪ್ರೇರಣೆ - ಬೇಂದ್ರೆ ಅಜ್ಜನಿಗೆ ಮತ್ತು ಅವರ ಮುಗಿಲ ಮಾರಿಗೆ ಎನ್ನುವ ಕವನ.





ಅಜ್ಜ ಅಜ್ಜಿಯ ಜೀವ ಗಾಬರಿಯಿಂದ ಕಾಯುತಿತ್ತ
ಆಗ ರಾತ್ರಿ ಅಗಿತ್ತ
ರೋಹಿಣಿದ್ಯಾಗ ಕೂಸಿನ ಅಳುವ ಕೇಳಿ ಬಂದಿತ್ತ
ತಾಯಿಯ ಅರಿವು ಹೋಗಿತ್ತ |1|

ದಪ್ಪ ಮೂಗಿನ ಪಾಪು,ನಾಲಿಗೆ ಹೊರಗೆ ಹಾಕುತಿತ್ತ
ತಾಸಿಗೆ ಒಮ್ಮೆ ಹಾಲು ಬೆಡುತಿತ್ತ
ಮಾರನೆ ದಿನ ಪಿಳಿ ಪಿಳಿ ಕಣ್ಣು ಬಿಡುತಿತ್ತ
ಗಿಡ್ಡ ಕಿವಿಯ,ಚಿವಗಣ್ಣಿನ ಕೂಸು ಚಂದಗೆ ಮಲಗುತಿತ್ತ |2|

ಕನಸಿನ್ಯಾಗ ಎನೋ ಕಂಡ ಬೆದರುತಿತ್ತ
ಸಣ್ಣ ಸದ್ದಿಗೆ ಮಿಡುಕತಿತ್ತ
ಹಸಿದ್ಯಾಗ ರೊಯ್ಯನೇ ಅಳುತಿತ್ತ
ಕೈ-ಕಾಲು ಸಣ್ಣಗೆ ಬಡಿಯುತಿತ್ತ |3|

ಅಪ್ಪ- ಅಮ್ಮನ ಲಕ್ಷ ಸೆಳೆಯುತಿತ್ತ
ಮುಂದೆ ಮಗುವಿನ ಲಾಲನೆ ಪಾಲನೆ ನಮ್ಮ ಮೇಲಿತ್ತ
ಸೋಮವಾರ ಮನೆಗೆ ಬಂದ್ಯಾಗ ಸಂತಸ ತುಂಬಿತ್ತ
ಎಲ್ಲರ ಮುಖದ್ಯಾಗ ಹರ್ಷದ ಹೊನಲು ತೇಲುತಿತ್ತ |4|